ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಕೆ ಹೇಗೆ ?

 ಗೃಹಜ್ಯೋತಿ ಯೋಜನೆಗೆ ಸಲ್ಲಿಸುವುದು ಹೇಗೆ :-

                           ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ, ಗೃಹಜ್ಯೋತಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಾಗುವುದು. ಇಂದಿನಿಂದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗುತ್ತಿದೆ. ಈ ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವ ದಾಖಲೆಗಳು ಬೇಕು?, ಷರತ್ತುಗಳು ಏನಿದೆ?, ಅರ್ಜಿಯನ್ನು ಲ್ಲಿಸುವ ವಿಧಾನ ಹೇಗೆ?, ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಮಾಹಿತಿಯ ಮೂಲಕ ನೀಡಲಾಗುತ್ತದೆ. 

ಸ್ವತಃ ಅರ್ಜಿ ಸಲ್ಲಿಸಲು ಸೇವಾ ಸಿಂಧುವಿನಲ್ಲಿ ಕ್ರಿಯೇಟ್ ಮಾಡಿ ಕೆಳಗೆ ನೀಡಿರುವ ಸ್ಟೆಪ್ ಳನ್ನು ನೀವು ಫಾಲೋ ಮಾಡಿ :-

ಸ್ಟೆಪ್ 1: ಮೊದಲಿಗೆ ನೀವು ಗೃಹಜೋತಿ ಸ್ಕೀಮ್ಗೆ ಅರ್ಜಿ ಸಲ್ಲಿಸಬೇಕಾದರೆ ಸೇವ ಸಿಂಧು ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಲು ಇಲ್ಲಿ ಕ್ಲಿಕ್ ಮಾಡಿ👉 https://sevasindhuservices.karnataka.gov.in/

s1

ಸ್ಟೆಪ್ 2: ನೀವು ಮೊದಲ ಸಾರಿ  ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುತ್ತಿದ್ದರೆ ನಿಮ್ಮ ಅಕೌಂಟನ್ನು ಕ್ರಿಯೇಟ್ ಮಾಡಬೇಕಾಗುತ್ತದೆ. ಅದಕ್ಕಾಗಿ New User ? Register Here ಮೇಲೆ ಕ್ಲಿಕ್ ಮಾಡಿ. ನಿಮ್ಮ  ಮೊಬೈಲ್ ನಂಬರ್ ಹಾಕಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.

s2

s3

ಸ್ಟೆಪ್ 3: ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅಥವಾ ಓಟಿಪಿ ಮೂಲಕ ಲಾಗಿನ್ ಆಗಿ. ನಂತರ ಅಪ್ಲೈ ಫಾರ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿ ಅನಂತರ ಅವೈಲಬಲ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿ ನಂತರ ಆಪ್ಷನ್ ಅಲ್ಲಿ  Gruha Jyothi ಅರ್ಜಿ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ

s4

gru

ಸ್ಟೆಪ್ 4: ನಿಮ್ಮ ವಿದ್ಯುತ್ ಬಿಲ್ ನಲ್ಲಿರುವಂತೆ ಬಳಕೆದಾರರ ಸಂಖ್ಯೆ, ಹೆಸರು,  ವಿಳಾಸ,  ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ  ಮುಂತಾದವು ಇಲ್ಲಿ ನಮೂದಿಸಿ. ಕೊನೆಯದಾಗಿ, ಅಗತ್ಯ ದಾಖಲೆಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ ಸಲ್ಲಿಸಿ.

dd

 

dd1

ಸ್ಟೆಪ್ 5: ಎಲ್ಲಾ ಸರಿಯಾದ ಮಾಹಿತಿಯನ್ನ ಬರ್ತಿಮಾಡಿ ಮತ್ತು ಕೇಳಲ್ಪಟ್ಟ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ

ಸೂಚನೆ: ಗೃಹಜೋತಿ ಯೋಜನೆಗೆ ಭಾರಿ ಪ್ರಮಾಣದ ಅರ್ಜಿ ಸಲ್ಲಿಸುತ್ತಿದ್ದಾರೆ ಹಾಗಾಗಿ ಸರ್ವರ್ ಡೌನ್ ಆಗುವ ಸಾಧ್ಯತೆಯಿದ್ದು ವೆಬ್ಸೈಟ್ ತೆರೆಯದಿದ್ದರೆ ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ, ಅರ್ಜಿ ಸಲ್ಲಿಸಿ

ಈ ತರಹದ ಉತ್ತಮ ಮಾಹಿತಿಗಾಗಿ ನಿಮ್ಮ ಎಲ್ಲಾ ಸ್ನೇಹತರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

Post a Comment

Previous Post Next Post